<?= $pageTitle ?>
Logo
ಮುಖಪುಟ ಓದುವುದು ಕೇಳು
Trending

ಒಂದು ಮನೆ, ಸಂಪೂರ್ಣ ಸೌಲಭ್ಯ : 4ಜಿ ಮೊಬೈಲ್​ ಟವರ್​, ವಿದ್ಯುತ್​, ರಸ್ತೆ ಸಂಪರ್ಕ

ಒಂದು ಮನೆ, ಸಂಪೂರ್ಣ ಸೌಲಭ್ಯ : 4ಜಿ ಮೊಬೈಲ್​ ಟವರ್​, ವಿದ್ಯುತ್​, ರಸ್ತೆ ಸಂಪರ್ಕ
Summary: ಈ ವಿಶೇಷ ಊರಿನ ಹೆಸರು ಕಾಕತಿ. ಲಹೌಲ್ ಸ್ಪಿತಿ ಜಿಲ್ಲೆಯ ಕಾಜಾ ಪಂಚಾಯತಿಗೆ ಸೇರುತ್ತದೆ. ಬಂಜರು ಪರ್ವತಗಳಿಂದ ಆವೃತವಾಗಿದೆ. ಇದನ್ನು ಸಂಪರ್ಕಿಸಲು ರಸ್ತೆ, ಮೊಬೈಲ್​​ನಲ್ಲಿ ಮಾತನಾಡಲು ಟವರ್​, ಬೆಳಕಿಗಾಗಿ ವಿದ್ಯುತ್​ ಸಂಪರ್ಕ ಕೂಡ ಕೊಡಲಾಗಿದೆ.
BELAGAVI NEWS :

ಸ್ಪಿಟಿ ಕಣಿವೆಯ ಪ್ರಧಾನ ಕಚೇರಿ ಕಾಜಾದಲ್ಲಿದೆ. ಕಾಕತಿ ಗ್ರಾಮವು ಕಾಜಾದಿಂದ 10 ಕಿಲೋಮೀಟರ್ ದೂರದಲ್ಲಿದೆ. ಈ ಊರಿಗೆ ನೂರಾರು ವರ್ಷಗಳ ಇತಿಹಾಸವಿದೆ. ಆದರೆ, ಇಲ್ಲಿ ಕೇವಲ ಒಂದು ಮನೆ ಮತ್ತು ಒಂದೇ ಕುಟುಂಬ ಮಾತ್ರ ವಾಸಿಸುತ್ತಿದೆ. ಸುತ್ತಲೂ ಹಲವು ಕಿಲೋಮೀಟರ್‌ಗಳವರೆಗೂ ಯಾವುದೇ ಜನವಸತಿ ಇಲ್ಲ. ಇಲ್ಲಿರುವ ಕುಟುಂಬವು ಪೂರ್ವಜರ ಭೂಮಿಯನ್ನು ಉಳುವೆ ಮಾಡುತ್ತಾ ಜೀವನ ಸಾಗಿಸುತ್ತಿದೆ.

ಕುಟುಂಬದಲ್ಲಿ ಇಬ್ಬರು ಸಹೋದರರಿದ್ದಾರೆ. ಕಿರಿಯ ಸಹೋದರ ಕಲ್ಜಾಂಗ್ ತಕ್ಪಾ ಲಾಮಾ ಎಂಬಾತ ಕುಟುಂಬದ ಸಂಪ್ರದಾಯದ ಪ್ರಕಾರ ಬೌದ್ಧ ಸನ್ಯಾಸಿಯಾಗಿದ್ದಾರೆ. ಹಿರಿಯ ಸಹೋದರ ತ್ಸೆರಿಂಗ್ ನಮಗ್ಯಾಲ್ ಅವರು ರಿಂಗ್ಜಿನ್ ಉಡಾನ್ ಎಂಬವರನ್ನು ವಿವಾಹವಾಗಿದ್ದಾರೆ. ಮೂವರು ಪುತ್ರರಿದ್ದಾರೆ. ಹಿರಿಯ ಪುತ್ರ ಕಾಂಗ್ರಾ ಮತ್ತು ಮಂಡಿ ಜಿಲ್ಲೆಗಳ ಗಡಿಯಲ್ಲಿರುವ ಬೌದ್ಧ ದೇವಾಲಯದಲ್ಲಿ ಅಧ್ಯಯನ ಮಾಡುತ್ತಿದ್ದಾರೆ. ಎರಡನೇ ಮಗು ವಿಶೇಷಚೇತನವಾಗಿದೆ. ಮೂರನೇ ಮಗ ಟ್ಯಾಕ್ಸಿ ಓಡಿಸುತ್ತಾನೆ. ಈ ಕುಟುಂಬವು ಅವರ ವಂಶಾವಳಿಯ ಐದನೇ ಪೀಳಿಗೆಯಾಗಿದೆ. 15 ಬಿಘಾ (ಎಕರೆ) ಭೂಮಿಯಲ್ಲಿ ಕೃಷಿ ಮಾಡುತ್ತಿದೆ.

"ನಾವು ಸ್ಪಿಟಿ ಕಣಿವೆಯನ್ನು ತುಂಬಾ ಪ್ರೀತಿಸುತ್ತೇವೆ. ವಲಸೆ ಹೋಗುವ ಬಗ್ಗೆ ಎಂದಿಗೂ ಯೋಚಿಸಿಲ್ಲ. ನಾವು ಗ್ರಾಮೀಣ ಪರಿಸರವನ್ನು ಇಷ್ಟಪಡುತ್ತೇವೆ. ಜನದಟ್ಟಣೆಯ ನಗರಗಳು ನಮಗೆ ಇಷ್ಟವಿಲ್ಲ. ಕೆಲವೊಮ್ಮೆ, ಚಳಿಗಾಲದಲ್ಲಿ ಮಂಡಿ ಜಿಲ್ಲೆಯ ರೆವಾಲ್ಸರ್ ಅಥವಾ ಉತ್ತರಾಖಂಡದ ನೈನಿತಾಲ್‌ಗೆ ಹೋಗಿದ್ದೇವೆ. ಸ್ವಲ್ಪ ಸಮಯದ ನಂತರ ಹಳ್ಳಿಗೆ ಹಿಂತಿರುಗುತ್ತೇವೆ. ನಮ್ಮ ಕುಟುಂಬದ ಅನೇಕ ತಲೆಮಾರುಗಳು ಇಲ್ಲಿ ವಾಸಿಸುತ್ತಾ ಬಂದಿವೆ" ಎಂದು ಕುಟುಂಬವು ತಿಳಿಸಿದೆ.

ಕಾಕತಿ ಗ್ರಾಮವು 2008 ರಲ್ಲಿ ರಸ್ತೆ ಸಂಪರ್ಕವು ಕಂಡಿತು. 2011 ರಲ್ಲಿ ಮನೆಗೆ ವಿದ್ಯುತ್ ಸಂಪರ್ಕವೂ ಸಿಕ್ಕಿತು. 2025 ರಲ್ಲಿ ಬಿಎಸ್​ಎನ್​ಎಲ್​ 4ಜಿ ಮೊಬೈಲ್ ನೆಟ್‌ವರ್ಕ್ ಸ್ಥಾಪಿಸಿತು. ಚೆರಿಂಗ್ ಅವರ ಪೂರ್ವಜರು ಈ ಗ್ರಾಮದಲ್ಲಿ ವಾಸಿಸುತ್ತಿದ್ದರು. ಪೂರ್ವಜರು ಕಟ್ಟಿಸಿದ ಮಣ್ಣಿನ ಮನೆ ಈಗಲೂ ಇದೆ. ಹಿಮಪಾತದ ವೇಳೆ ಮನೆಯಿಂದ ಹೊರಬರಲು ಸಾಧ್ಯವಾಗದ ಕಾರಣ, ಮನೆಯೊಳಗೆ ಔಷಧಗಳು, ಆಹಾರ ಸಾಮಗ್ರಿ, ಇತರ ಅಗತ್ಯ ವಸ್ತುಗಳನ್ನು ಸಂಗ್ರಹಿಸಿಕೊಂಡಿರುತ್ತದೆ.

ಚಳಿಗಾಲದಲ್ಲಿ ಇಲ್ಲಿ -20 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆ ದಾಖಲಾಗುತ್ತದೆ. ಕುತೂಹಲಕಾರಿ ಸಂಗತಿಯೆಂದರೆ, ಈ ಗ್ರಾಮವು ಡಿಜಿಟಲ್ ಇಂಡಿಯಾಕ್ಕೆ ಸಂಪರ್ಕ ಹೊಂದಿದೆ. ಬಿಎಸ್‌ಎನ್‌ಎಲ್ ಇಲ್ಲಿ 4ಜಿ ಟವರ್ ಸ್ಥಾಪಿಸಿದೆ. ಇದರಿಂದ, ಕುಟುಂಬವು ಮೊಬೈಲ್ ಫೋನ್‌ಗಳನ್ನು ಬಳಕೆ ಮಾಡುತ್ತಿದೆ. 2011 ರಲ್ಲಿ ಈ ಮನೆಗೆ ವಿದ್ಯುತ್ ಸಂಪರ್ಕ ಕೂಡ ಕಲ್ಪಿಸಲಾಗಿದೆ.

ಇನ್ನಷ್ಟು ಓದಿರಿ :
ಭಾರತ–ಅಮೆರಿಕ ವ್ಯಾಪಾರ ಸಂಭಾಷಣೆ : ಟ್ರಂಪ್​
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online