ನಿರಂತರ ನಿದ್ರಾಹೀನತೆ ದೇಹದ ಹಾರ್ಮೋನ್ ಸಮತೋಲನವನ್ನು ಹಾಳು ಮಾಡಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸಬಹುದು. ಇದರಿಂದ ಮಧುಮೇಹ ಹೃದಯ ರೋಗ ಮತ್ತು ಒಬ್ಬೆಯತೆ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳು ಎದುರಾಗಲು ಸಾಧ್ಯತೆ ಇದೆ.
ಆದ್ದರಿಂದ ಪ್ರತಿದಿನ ಕನಿಷ್ಠ ೭ ರಿಂದ ೮ ಗಂಟೆಗಳ ಗುಣಮಟ್ಟದ ನಿದ್ರೆ ಅತ್ಯವಶ್ಯಕ ಎಂದು ವೈದರು ಸಲಹೆ ನೀಡುತ್ತಾರೆ. ಉತ್ತಮ ನಿದ್ರೆ ಕೇವಲ ದೇಹದ ವಿಶ್ರಾಂತಿಗೆ ಮಾತ್ರವಲ್ಲ ದೀರ್ಘಾಯುಷ್ಟ ಮತ್ತು ಒಟ್ಟಾರೆ ಆರೋಗ್ಯವನ್ನು ಕಾಪಾಡಿಕೊಳ್ಳಲು ಕೂಡ ಮುಖ್ಯವಾಗಿದೆ.
ಇಂದಿನ ವೇಗದ ಮತ್ತು ಒತ್ತಡದ ಜೀವನಶೈಲಿಯಲ್ಲಿ ಕೆಲಸ ಮುಗಿಸಲು ತಡರಾತ್ರಿ ಎಚ್ಚರವಾಗಿರುವುದು ಹಾಗೂ ಬೆಳಗ್ಗೆ ಆಯಾಸವನ್ನು ನಿವಾರಿಸಲು ಕಾಫಿ ಕುಡಿಯುವುದು ನಮ್ಮಲ್ಲಿ ಅನೇಕರ ದಿನಚರಿಯ ಭಾಗವಾಗಿಬಿಟ್ಟಿದೆ. ದಿನಕ್ಕೆ ಕೇವಲ 5 ರಿಂದ 6 ಗಂಟೆಗಳ ನಿದ್ರೆ ಸಾಕು. ಉಳಿದ ಸಮಯದಲ್ಲಿ ಹೆಚ್ಚು ಕೆಲಸ ಮಾಡಬಹುದು ಎಂದು ಹಲವರು ಭಾವಿಸುತ್ತಾರೆ. ಆದರೆ ಈ ಅಭ್ಯಾಸ ದೀರ್ಘಾವಧಿಯಲ್ಲಿ ಆರೋಗ್ಯಕ್ಕೆ ಗಂಭೀರ ಹಾನಿಯನ್ನು ಉಂಟುಮಾಡಬಹುದು.
ಅನೇಕ ವೈದ್ಯಕೀಯ ಅಧ್ಯಯನಗಳ ಪ್ರಕಾರ 6:00ಗಳಿಗಿಂತ ಕಡಿಮೆ ನಿದ್ರೆ ಮಾಡುವರು ನಿರಂತರ ದಣಿವು , ಏಕಾಗ್ರತೆಯ ಕೊರತೆ ಮತ್ತು ಮಾನಸಿಕ ಒತ್ತಡವನ್ನು ಅನುಭವಿಸುತ್ತಾರೆ. ಇದಲ್ಲದೆ ನಿದ್ರಾ ಹೀನತೆ ಕ್ರಮೇಣ ದೇಹದ ಚಯಾಪಚಯ ಕ್ರಿಯೆ ರೋಗನಿರೋಧಕ ವ್ಯವಸ್ಥೆ ಹೃದಯ ಆರೋಗ್ಯ ಮತ್ತು ಮೆದುಳಿನ ಕಾರ್ಯಕ್ಷಮತೆ ಮೇಲೆ ನೇರ ಪರಿಣಾಮ ಬೀರುತ್ತದೆ ಸರಿಯಾದ ನಿದ್ರೆ ಇಲ್ಲದಿದ್ದರೆ ಹಾರ್ಮೋನ್ ಸಮತೋಲನ ಹದಗೆಟ್ಟು ಮಧುಮೇಹ ಹೃದಯ ರೋಗ ಹಾಗೂ ಸ್ಮರಣೆ ಸಂಬಂಧಿತ ಸಮಸ್ಯೆಗಳ ಅಪಾಯವು ಹೆಚ್ಚಾಗುತ್ತದೆ.
ಆದರಿಂದ ತಜ್ಞರು ಪ್ರತಿದಿನ ಕನಿಷ್ಠ ೭ ರಿಂದ ೮ ಗಂಟೆಗಳ ಗುಣಮಟ್ಟದ ನಿದ್ದೆ ಪಡೆಯುವುದನ್ನು ಅತ್ಯವಶ್ಯಕವೆಂದು ಸಲಹೆ ನೀಡುತ್ತಾರೆ .ಉತ್ತಮ ನಿದ್ರೆ ದೇಹಕ್ಕೆ ಶಕ್ತಿ ತುಂಬುವಷ್ಟೇ ಅಲ್ಲ ದೀರ್ಘಕಾಲದ ಆರೋಗ್ಯ ಮತ್ತು ಉತ್ತಮ ಜೀವನಮಟ್ಟವನ್ನು ಕಾಪಾಡಿಕೊಳ್ಳಲು ಪ್ರಮುಖವಾಗಿದೆ.
ನಿದ್ರೆ ಕಡಿಮೆಯಾದರೆ ಜೀವಿತಾವಧಿಗೂ ಅಪಾಯ!
ನಿದ್ರಾಹೀನತೆ ದೇಹದ ಮೇಲೆ ಬೀರುವ ಗಂಭೀರ ಪರಿಣಾಮಗಳು :
ನಿದ್ರೆಯನ್ನು ನಿರ್ಲಕ್ಷ್ಯ ಮಾಡುವುದು ನಮ್ಮ ಒಟ್ಟಾರೆ ದೇಹದ ಆರೋಗ್ಯದ ಮೇಲೆ ಭಾರಿ ಪರಿಣಾಮ ಬೀರುತ್ತದೆ. ಅಧ್ಯಯನಗಳ ಪ್ರಕಾರ ಸರಿಯಾದ ನಿದ್ರೆ ಸಿಗದಿದ್ದರೆ ಕೇವಲ ದಣಿಯು ಮಾತ್ರವಲ್ಲ, ಜೀವಿತಾವಧಿಯನ್ನೇ ಕಡಿಮೆ ಮಾಡುವಷ್ಟು ಅಪಾಯ ಉಂಟಾಗಬಹುದು.
ವೈದ್ಯಕೀಯ ಸಂಶೋಧನೆಗಳ ಪ್ರಕಾರ ವಯಸ್ಕರ ದಿನಕ್ಕೆ ಕನಿಷ್ಠ ೭ಗಂಟೆಗಳು ಅಥವಾ ಅದಕ್ಕಿಂತ ಹೆಚ್ಚು ಸಮಯ ನಿದ್ರೆ ಮಾಡಬೇಕು ಆದರೆ ಈ ಪ್ರಮಾಣ ಕಡಿಮೆಯಾದಾಗ ದೇಹದಲ್ಲಿ ಕೆಲವು ಅಪಾಯಕಾರಿ ಬದಲಾವಣೆಗಳು ಶುರುವಾಗುತ್ತವೆ.
ನಿದ್ರಾಹೀನತೆಯಿಂದ ದೇಹದಲ್ಲಿ ಸಂಭವಿಸುವ ಬದಲಾವಣೆಗಳು:
೧) ಚಯಾಪಚಯ ಕುಸಿತ:
ಕಡಿಮೆ ನಿದ್ರೆ ದೇಹದ ಎನರ್ಜಿ ಬಳಸುವ ಕ್ರೀಡೆಯನ್ನು ತಡೆಗೊಳಿಸುತ್ತದೆ. ಅದರಿಂದ ತೂಕ ಏರಿಕೆ ಅಥವಾ Obesity ಸಂಭವಿಸಬಹುದು.
೨) ರೋಗನಿರೋಧಕ ವ್ಯವಸ್ಥೆ ಕುಸಿತ:
*ನಿದ್ರಾಹೀನತೆಯಿಂದ ದೇಹದ ಇಮ್ಮ್ಯೂನ ಪ್ರತಿಕ್ರಿಯೆ ಕುಂದು ಬರುತ್ತದೆ.
*ಸೋಂಕು ಮತ್ತು ಸೋಂಕುಮುಕ್ತ ದೇಹದ ಪ್ರತಿಕ್ರಿಯೆ ನಿಧಾನವಾಗುತ್ತದೆ.
೩) ಹೃದಯದ ಆರೋಗ್ಯಕ್ಕೆ ತೀರ್ವ ಅಪಾಯ:
ಹೃದಯದ ಹೃದಯಘಾತ ಮತ್ತು ರಕ್ತದೊಡತ್ತ ಹೆಚ್ಚಳ ಹೃದಯದ ಅಪಾಯ ಹೆಚ್ಚಾಗುತ್ತದೆ.
೪) ಮೆದುಳಿನ ಕಾರ್ಯಕ್ಷಮತೆ ಕುಸಿತ:
*ಗಮನ ಕೇಂದ್ರೀಕರಿಸಲು ಕಷ್ಟ ಸ್ಮರಣೆದ ದೌರ್ಬಲ್ಯ, ಮಾನಸಿಕ ಒತ್ತಡ ಹೆಚ್ಚಳ.
*ಮನೋಭಾವ ಕೆಟ್ಟ ಮನಸ್ಥಿತಿ ಮತ್ತು ಅತಿರೇಕೆ ಚಿಂತನೆಗಳಿಗೂ ಕಾರಣವಾಗಬಹುದು.
೫) ಹಾರ್ಮೋನ್ ಸಮತೋಲನ ಕಡತೆಯಾಗುವುದು
*ಉಪವಾಸ, ಚಯಾಪಚಯ, ಸಕ್ಕರೆಮಟ್ಟ ಮತ್ತು ಸ್ಟ್ರೆಸ್ ,ಹಾರ್ಮೋನ್ ಗಳ ಸಮತೋಲನ ಹಾಳಾಗುತ್ತದೆ.
ಮುಖ್ಯ ಸಂದೇಶ: ನಿದ್ರೆ ಕಡಿಮೆ ಮಾಡುವ ಅಭ್ಯಾಸ ದೀರ್ಘಾವಧಿಯಲ್ಲಿ ಆರೋಗ್ಯ ಮತ್ತು ಜೀವನ ಮಟ್ಟಕ್ಕೆ ಬಾರಿ ಹಾನಿ ಉಂಟಾಗುತ್ತದೆ ಪ್ರತಿದಿನ ಕನಿಷ್ಠ 7ರಿಂದ 8 ಗಂಟೆಗಳ ಗುಣಮಟ್ಟದ ನಿದ್ರೆ ಪಡೆಯುವುದು ದೇಹ ಮನಸ್ಸು ಮತ್ತು ದೀರ್ಘಯುಷ್ಟಕ್ಕೆ ಅತ್ಯಂತ ಮುಖ್ಯವಾಗಿದೆ.
ಇನ್ನಷ್ಟು ಓದಿರಿ:
ಮಕ್ಕಳಿಂದ ದೊಡ್ಡವರವರೆಗೆ ಎಲ್ಲರಿಗೂ ಇಷ್ಟವಾಗುವ ಶೇಂಗಾ ಚಟ್ನಿ : ಸಿಂಪಲ್ & ಟೇಸ್ಟಿ ರೆಸಿಪಿ