ಆಧುನಿಕ ವೈದ್ಯಕೀಯದಲ್ಲಿ ಆ್ಯಂಟಿಬಯಾಟಿಕ್ಸ್ (Antibiotics) ಅತ್ಯಂತ ಮುಖ್ಯವಾದ ಔಷಧಿಗಳಾಗಿದ್ದರೂ, ಅತಿಯಾಗಿ ಸೇವಿಸಿದರೆ ಆರೋಗ್ಯಕ್ಕೆ ತೀವ್ರ ಅಪಾಯ ಉಂಟಾಗುತ್ತದೆ. ಪ್ರಸಿದ್ಧ ಹೃದ್ರೋಗ ತಜ್ಞ ಡಾ. ದೇವಿ ಪ್ರಸಾದ್ ಶೆಟ್ಟಿ ತಮ್ಮ ಇತ್ತೀಚಿನ Health Advisory ನಲ್ಲಿ ಈ ಬಗ್ಗೆ citizens ಗೆ ಜಾಗೃತಿ ನೀಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಆ್ಯಂಟಿಬಯಾಟಿಕ್ಸ್ ಇಲ್ಲದ ಮನೆಗಳೇ ಇಲ್ಲ ಎಂಬ ಪರಿಸ್ಥಿತಿ ಬಂದಿದೆ. ಸಣ್ಣ ಜ್ವರ, ಮೈಕೈ ನೋವು, ಕಫ ಹೀಗೆ ಏನಾದರೂ ಸಣ್ಣ ಬದಲಾವಣೆ ದೇಹದಲ್ಲಿ ಆದ ತಕ್ಷಣ ವೈದ್ಯರ ಸಲಹೆಯಿಲ್ಲದೆ ಆ್ಯಂಟಿಬಯೋಟಿಕ್ಗಳನ್ನು ಸೇವನೆ ಮಾಡುವುದರಿಂದ ದೇಹದಲ್ಲಿ ಎಷ್ಟೆಲ್ಲಾ ಸಮಸ್ಯೆಗಳಾಗಬಹುದು ಎಂಬುದರ ಬಗ್ಗೆ ಎಂದಾದರೂ ಯೋಚಿಸಿದ್ದೀರಾ? ಈ ವಿಷಯವಾಗಿ ಹೃದ್ರೋಗ ತಜ್ಞ ಡಾ. ದೇವಿ ಪ್ರಸಾದ್ ಶೆಟ್ಟಿ ಮಾಹಿತಿ ಹಂಚಿಕೊಂಡಿದ್ದು, ಇತ್ತೀಚಿನ ದಿನಗಳಲ್ಲಿ ರೋಗಿಯ ದೇಹದಲ್ಲಿ ಆ್ಯಂಟಿಬಯಾಟಿಕ್ಸ್ ಸರಿಯಾಗಿ ಕೆಲಸ ಮಾಡದಿರಲು ಕಾರಣವೇನು? ಹೀಗೆ ಮುಂದುವರಿದರೆ ಏನಾಗುತ್ತದೆ ಎಂಬುದರ ಬಗ್ಗೆ ವಿವರಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ (PM Narendra Modi) ಮನ್ ಕಿ ಬಾತ್ನ 129 ನೇ ಸಂಚಿಕೆಯಲ್ಲಿ ಆ್ಯಂಟಿಬಯಾಟಿಕ್ಸ್ ಔಷಧಗಳ ದುರುಪಯೋಗದ ಬಗ್ಗೆ ಮಾತನಾಡಿದ್ದು ವೈದ್ಯರ ಸಲಹೆಯಿಲ್ಲದೆ ಆ್ಯಂಟಿಬಯಾಟಿಕ್ಸ್ ಗಳನ್ನು ಬಳಸದಂತೆ ಜನರ ಬಳಿ ಮನವಿ ಮಾಡಿದ್ದರು. ಈ ವಿಷಯಕ್ಕೆ ಸಂಬಂಧಿಸಿದಂತೆ ಹೃದ್ರೋಗ ತಜ್ಞ ಡಾ. ದೇವಿ ಪ್ರಸಾದ್ ಶೆಟ್ಟಿ (Dr. Devi Prasad Shetty) ನರೇಂದ್ರ ಮೋದಿ ಅವರಿಗೆ ಕೃತಜ್ಞತೆ ತಿಳಿಸಿದ್ದು, ತಮ್ಮ ವೃತ್ತಿ ಜೀವನದಲ್ಲಿ ನೋಡಿದಂತಹ ಬದಲಾವಣೆಗಳನ್ನು ವಿಡಿಯೋ ಮೂಲಕ ಹಂಚಿಕೊಂಡಿದ್ದು, ಇತ್ತೀಚಿನ ದಿನಗಳಲ್ಲಿ ರೋಗಿಯ ದೇಹದಲ್ಲಿ ಆ್ಯಂಟಿಬಯಾಟಿಕ್ಸ್ ಸರಿಯಾಗಿ ಕೆಲಸ ಮಾಡದಿರಲು ಕಾರಣವೇನು, ಹೀಗೆ ಮುಂದುವರಿದರೆ ಏನಾಗುತ್ತದೆ ಎಂಬುದರ ಬಗ್ಗೆ ಹೆಚ್ಚಿನ ವಿವರಣೆ ನೀಡಿದ್ದಾರೆ.
ದೇವಿ ಪ್ರಸಾದ್ ಶೆಟ್ಟಿ ಹೇಳಿರುವ ಪ್ರಕಾರ, ಅವರ ವೃತ್ತಿಯ ಮೊದಲು 15 ವರ್ಷ ತುಂಬಾ ಚೆನ್ನಾಗಿದ್ದು ಎಷ್ಟೇ ದೊಡ್ಡ ಆಪರೇಷನ್ ಮಾಡಿದರೂ ಸಹ ಎರಡು ದಿನಗಳ ಆ್ಯಂಟಿಬಯಾಟಿಕ್ಸ್ ನೀಡುತ್ತಿದ್ದು ಬಳಿಕ ಅದನ್ನು ನಿಲ್ಲಿಸಲಾಗುತ್ತಿತ್ತು. ಆದರೆ ಈ ಹತ್ತು ವರ್ಷಗಳಲ್ಲಿ ಈ ರೀತಿಯ ಅಭ್ಯಾಸ ಪೂರ್ತಿಯಾಗಿ ಬದಲಾಗಿದೆ.
ಈಗ ಸರ್ಜರಿ ಆದ ಮೇಲೆ ರೋಗಿಗೆ ಇನ್ಫೆಕ್ಷನ್ ಆಗುವ ಭಯ ದುಪ್ಪಟ್ಟಾಗಿದೆ. ಸೋಂಕು ತಗಲುವುದು ಸಾಮಾನ್ಯ. ಆದರೆ ವೈದ್ಯರು ನೀಡುವಂತಹ ಆ್ಯಂಟಿಬಯಾಟಿಕ್ಸ್ ದೇಹದಲ್ಲಿ ಅಂದುಕೊಂಡ ರೀತಿ ಕಾರ್ಯನಿವಹಿಸುವುದಿಲ್ಲ ಎನ್ನುವುದು ಆತಂಕಕ್ಕೆ ಕಾರಣವಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಅತಿಯಾದ ಆ್ಯಂಟಿಬಯಾಟಿಕ್ಸ್ ಸೇವನೆಯಿಂದ ಉಂಟಾಗುವ ಅಪಾಯಗಳು गंभीर. Dr. Devi Prasad Shetty’s advisory ಪ್ರಕಾರ, only prescribed medicines and proper usage ಮೂಲಕ ನಿಜವಾದ ಆರೋಗ್ಯ ಮತ್ತು Life-long immunity ಕಾಪಾಡಬಹುದು.
ಇನ್ನಷ್ಟು ಓದಿರಿ :
ಕ್ರಿಕೆಟ್ ನಿಂದ ಉಸ್ಮಾನ್ ಖವಾಜಾ ನಿವೃತ್ತಿ: ನಿಷ್ಠುರ ನ್ಯಾಯ