<?= $pageTitle ?>
Logo
ಮುಖಪುಟ ಓದುವುದು ಕೇಳು
Business

ವೆನಿಜುವೆಲಾ ಬಿಕ್ಕಟ್ಟು ಹೂಡಿಕೆದಾರರಿಗೆ ಎಚ್ಚರಿಕೆ : ಬೆಳ್ಳಿ- ಬಂಗಾರದ ಬೆಲೆ

ವೆನಿಜುವೆಲಾ ಬಿಕ್ಕಟ್ಟು ಹೂಡಿಕೆದಾರರಿಗೆ ಎಚ್ಚರಿಕೆ : ಬೆಳ್ಳಿ- ಬಂಗಾರದ ಬೆಲೆ
Summary: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಫೆಬ್ರವರಿಯ ಕಾಮೆಕ್ಸ್​ ಚಿನ್ನದ ಫ್ಯೂಚರ್​ 24.9 ಅಮೆರಿಕನ್​ ಡಾಲರ್​ ಅಂದರೆ 0.56ರಷ್ಟು ಏರಿಕೆ ಕಾಣುವ ಮೂಲಕ ಔನ್ಸ್​ ಚಿನ್ನದ ದರ 4,476.4 ಡಾಲರ್​​ಗೆ ಏರಿಕೆ ಕಂಡಿದೆ.
BELAGAVI NEWS :

ವೆನೆಜುವೆಲಾದಲ್ಲಿನ ರಾಜಕೀಯ ಪ್ರಕ್ಷುಬ್ಧತೆಯ ನಡುವೆ ಸತತ ಮೂರನೇ ದಿನವೂ ಚಿನ್ನ - ಬೆಳ್ಳಿ ಬೆಲೆಯಲ್ಲಿ ಭಾರಿ ಏರಿಕೆ ಕಂಡಿದೆ. ದೇಶೀಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ದರಗಳು ಮತ್ತೆ ಏರಿಕೆ ಕಾಣುವ ಮೂಲಕ ಹೂಡಿಕೆದಾರರ ಸುರಕ್ಷಿತ ಆಸ್ತಿ ಎಂಬುದನ್ನು ಸಾಬೀತು ಮಾಡಿದೆ. ಅಮೂಲ್ಯ ಲೋಹಗಳ ಬೆಲೆ ಏರಿಕೆಯಲ್ಲಿ ವೆನಿಜುವೆಲಾದ ರಾಜಕೀಯ ಬಿಕ್ಕಟ್ಟು ಮತ್ತು ಭೌಗೋಳಿಕ ರಾಜಕೀಯ ಉದ್ವಿಗ್ನತೆಯಲ್ಲಿ ಅಮೆರಿಕ ಮತ್ತು ಲ್ಯಾಟಿನ್​ ಅಮೆರಿಕ ದೇಶಗಳು ಭಾಗಿಯಾಗಿರುವುದು ಪ್ರಮುಖ ಅಂಶವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಮಲ್ಟಿ ಕಮಾಡಿಟಿ ಎಕ್ಸ್​ಚೆಂಜ್​ (ಎಂಸಿಎಕ್ಸ್​) ಪ್ರಕಾರ, ಫೆಬ್ರವರಿ ವಿತರಣೆಯ ಚಿನ್ನದಲ್ಲಿ 445ರೂ ಅಂದರೆ 0.32ರಷ್ಟು ಏರಿಕೆ ಕಾಣುವ ಮೂಲಕ 10 ಗ್ರಾಂ ಚಿನ್ನದ ಬೆಲೆ 1,38,565 ರೂ ದಾಖಲಾಗಿದೆ. ಬೆಳ್ಳಿ ಕೂಡ ನಿರಂತರವಾಗಿ ಏರಿಕೆ ಕಾಣುವ ಮೂಲಕ ತನ್ನ ಸ್ಥಾನವನ್ನು ಮತ್ತಷ್ಟು ಬಲಗೊಳಿಸಿಕೊಳ್ಳುತ್ತಿದೆ. ಮಾರ್ಚ್​ ತಿಂಗಳ ವಿತರಣೆಯಲ್ಲಿ 3,715 ರೂ ಏರಿಕೆ ಕಾಣುವ ಮೂಲಕ ಕೆಜಿ ಬೆಳ್ಳಿ ದರ 2,49,870 ರೂಗೆ ದಾಖಲಾಗಿದೆ.

ವೆನೆಜುವೆಲಾದಲ್ಲಿನ ರಾಜಕೀಯ ಪ್ರಕ್ಷುಬ್ಧತೆ ನಡುವೆ ಸುರಕ್ಷಿತ ಸ್ವತ್ತುಗಳಿಗೆ ಬೇಡಿಕೆ ಹೆಚ್ಚಾದ ಕಾರಣ, ಚಿನ್ನದ ಬೆಲೆಗಳು ಪ್ರತಿ ಔನ್ಸ್‌ಗೆ 4,450 ಡಾಲರ್‌ಗಿಂತ ಹೆಚ್ಚಾಗಿದೆ. ಇದು ಸತತ ಮೂರನೇ ಬಾರಿ ಏರಿಕೆಯಾಗಿದೆ ಎಂದು ರಿಲಯನ್ಸ್ ಸೆಕ್ಯುರಿಟೀಸ್‌ನ ಹಿರಿಯ ಸಂಶೋಧನಾ ವಿಶ್ಲೇಷಕ ಜಿಗರ್ ತ್ರಿವೇದಿ ಹೇಳಿದ್ದಾರೆ.

ಸ್ವಿಸ್ ಬ್ಯಾಂಕುಗಳು ಮಡುರೊ ಸಂಬಂಧಿತ ಆಸ್ತಿಗಳನ್ನು ವಶಪಡಿಸಿಕೊಳ್ಳಲು ಮುಂದಾಗಿವೆ ಎಂಬ ವರದಿಗಳು ಅಮೂಲ್ಯ ಲೋಹಗಳ ಬೆಲೆಗಳ ಮೇಲೆ ಮತ್ತಷ್ಟು ಪರಿಣಾಮ ಬೀರಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಈ ನಡುವೆ ರೂಪಾಯಿ ದುರ್ಬಲತೆಯು ದೇಶೀಯ ಚಿನ್ನ ಮತ್ತು ಬೆಳ್ಳಿ ಬೆಲೆಗಳಿಗೆ ಬೆಂಬಲವನ್ನು ನೀಡುತ್ತಲಿದೆ ಎಂದರು.

ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​, ಕೊಲಂಬಿಯಾ, ಕ್ಯೂಬಾ ಮತ್ತು ಮೆಕ್ಸಿಕೊಗೆ ನೀಡಿರುವ ಬೆದರಿಕೆಗಳು ಮಾರುಕಟ್ಟೆ ಮೇಲೆ ಭಾರಿ ಪ್ರಭಾವ ಬೀರಿದೆ. ಮಾದಕವಸ್ತು ಸಾಗಣೆಗೆ ಸಂಬಂಧಿಸಿದಂತೆ ಹೂಡಿಕೆದಾರರ ಭಾವನೆಗಳ ಮೇಲೆ ಮತ್ತಷ್ಟು ಪರಿಣಾಮ ಬೀರಿವೆ ಎಂದು ಮೆಹ್ತಾ ಇಕ್ವಿಟೀಸ್ ಲಿಮಿಟೆಡ್‌ನ ಕಮಾಡಿಟೀಸ್ ಉಪಾಧ್ಯಕ್ಷ ರಾಹುಲ್ ಕಲಾಂತ್ರಿ ತಿಳಿಸಿದ್ದಾರೆ.

ಇನ್ನಷ್ಟು ಓದಿರಿ:
ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ : ಮಕ್ಕಳ ಶಿಕ್ಷಣಕ್ಕೆ ಭದ್ರ ಭವಿಷ್ಯ
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online