<?= $pageTitle ?>
Logo
ಮುಖಪುಟ ಓದುವುದು ಕೇಳು
Trending

ವೆನಿಜುವೆಲಾ ಹಂಗಾಮಿ ಅಧ್ಯಕ್ಷ : ಡೆಲ್ಸಿ ರೊಡ್ರಿಗಸ್ ಪ್ರಮಾಣ ವಚನ

ವೆನಿಜುವೆಲಾ ಹಂಗಾಮಿ ಅಧ್ಯಕ್ಷ : ಡೆಲ್ಸಿ ರೊಡ್ರಿಗಸ್ ಪ್ರಮಾಣ ವಚನ
Summary: ಡೆಲ್ಸಿ ರೊಡ್ರಿಗಸ್​ಗೆ ಅವರ ಸಹೋದರನಾಗಿರುವ ರಾಷ್ಟ್ರೀಯ ಅಸೆಂಬ್ಲಿ ಶಾಸಕಾಂಗದ ಮುಖ್ಯಸ್ಥ ಜಾರ್ಜ್ ರೊಡ್ರಿಗಸ್ ಪ್ರಮಾಣವಚನ ಬೋಧಿಸಿದರು. ಮಡುರೊ ಪುತ್ರ ನಿಕೋಲಸ್ ಮಡುರೊ ಗುಯೆರಾ ಕೂಡ ಹಂಗಾಮಿ ಅಧ್ಯಕ್ಷರಿಗೆ ತಮ್ಮ ಬೆಂಬಲ ನೀಡಿದ್ದಾರೆ.
BELAGAVI NEWS :

ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಸೋಮವಾರ ನಡೆದ ಸಮಾರಂಭದಲ್ಲಿ ಪ್ರಮಾಣ ವಚನ ಸ್ವೀಕರಿಸಿ ಮಾತನಾಡಿದ ರೊಡ್ರಿಗಸ್​​, ವಾಷಿಂಗ್ಟನ್​ಗೆ ಸಹಕಾರ ನೀಡುವ ಭರವಸೆ ನೀಡಿದರು.
ಕ್ಯಾರಕಸ್​ ಮೇಲೆ ಅಮೆರಿಕ ಸೇನೆ ದಾಳಿ ಮಾಡಿ ಸಂಸತ್ತಿನ ಎಡಪಂಥೀಯ ನಾಯಕ ಮಡುರೊ ಅವರನ್ನು ಸೆರೆಹಿಡಿದ ಅಮೆರಿಕದ ಕ್ರಮವನ್ನು ಸಂಸತ್ತು ಖಂಡಿಸುತ್ತದೆ. ಇದು ಜಗತ್ತನ್ನು ಬೆಚ್ಚಿ ಬೀಳಿಸಿದೆ ಎಂದು ರೊಡ್ರಿಗಸ್​ ಮಡುರೊಗೆ ಬೆಂಬಲ ನೀಡುವುದಾಗಿ ತಿಳಿಸಿದರು. ಶಾಸಕಾಂಗದ ಹೊರಗೆ ಸಾವಿರಾರು ವೆನೆಜುವೆಲಾ ಜನರು ತಮ್ಮ ನಾಯಕನ ಬಿಡುಗಡೆಗೆ ಒತ್ತಾಯಿಸಿದರು.

ಡೆಲ್ಸಿ ರೊಡ್ರಿಗಸ್​ಗೆ ಅವರ ಸಹೋದರನಾಗಿರುವ ರಾಷ್ಟ್ರೀಯ ಅಸೆಂಬ್ಲಿ ಶಾಸಕಾಂಗದ ಮುಖ್ಯಸ್ಥ ಜಾರ್ಜ್ ರೊಡ್ರಿಗಸ್ ಪ್ರಮಾಣವಚನ ಬೋಧಿಸಿದರು. ನನ್ನ ಸಹೋದರ, ನನ್ನ ಅಧ್ಯಕ್ಷ ನಿಕೋಲಸ್ ಮಡುರೊ ಮೊರೊಸ್ ಅವರನ್ನು ಮರಳಿ ಕರೆತರಲು ಎಲ್ಲ ಕಾರ್ಯವಿಧಾನಗಳನ್ನು ನಡೆಸುವುದಾಗಿ ತಿಳಿಸಿದರು. 56 ವರ್ಷದ ರೊಡ್ರಿಗಸ್ ಕಾರ್ಮಿಕ ವಕೀಲರಾಗಿದ್ದು, ಖಾಸಗಿ ವಲಯದೊಂದಿಗೆ ಬಲವಾದ ಸಂಬಂಧ ಹೊಂದಿದ್ದಾರೆ.

ವೆನಿಜುವೆಲಾ ಮೇಲೆ ದಾಳಿ ಮಾಡಿ, ಅಧ್ಯಕ್ಷ ನಿಕೋಲಸ್ ಮಡುರೊ ಅವರನ್ನು ಸೆರೆ ಹಿಡಿದಿರುವ ಅಮೆರಿಕ ವಿಚಾರಣೆಗೆ ಒಳಪಡಿಸುತ್ತಿದೆ ಈ ಬೆಳವಣಿಗೆಯ ನಡುವೆ ವೆನಿಜುವೆಲಾದ ಮಧ್ಯಂತರ ಅಧ್ಯಕ್ಷರಾಗಿ ಡೆಲ್ಸಿ ರೊಡ್ರಿಗಸ್ ಅವರು ಸಂಸತ್ತಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಕಳೆದ ವರ್ಷ ಮೇ ತಿಂಗಳಲ್ಲಿ ಆಯ್ಕೆಯಾದ 283 ಶಾಸಕರು ಸೋಮವಾರ ಪ್ರಮಾಣ ವಚನ ಸ್ವೀಕರಿಸಿದರು.

ಸರ್ಕಾರದಲ್ಲಿ ವಿರೋಧ ಪಕ್ಷದ ಶೇಕಡಾವರು ಗಣನೀಯವಾಗಿ ಕಡಿಮೆ ಇದ್ದು, ಇದನ್ನು ಸಣ್ಣ ಗುಂಪು ಎಂದು ಪರಿಗಣಿಸಲಾಗಿದೆ. ವಿರೋಧ ಪಕ್ಷದ ಬಹುಪಾಲು ಸದಸ್ಯರು, ವಿಶೇಷವಾಗಿ ನೊಬೆಲ್ ಪ್ರಶಸ್ತಿ ವಿಜೇತ ಮಚಾದೊ ನೇತೃತ್ವದ ಗುಂಪಿನಲ್ಲಿದ್ದಾರೆ.

ಇನ್ನಷ್ಟು ಓದಿರಿ:
ರಾಜ್ಯದ ಸರ್ಕಾರಿ ಶಾಲೆಗಳ ಸಮಗ್ರ ಅಭಿವೃದ್ಧಿ : ಸರ್ಕಾರ ಪ್ರಸ್ತಾಪ
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online