<?= $pageTitle ?>
Logo
ಮುಖಪುಟ ಓದುವುದು ಕೇಳು
Life_Style

ಮದುವೆ ತಡವಾದರೆ ಏನಾಗುತ್ತದೆ? ವಿವಾಹಕ್ಕೆ ಸರಿಯಾದ ವಯಸ್ಸು ಯಾವುದು?

ಮದುವೆ ತಡವಾದರೆ ಏನಾಗುತ್ತದೆ? ವಿವಾಹಕ್ಕೆ ಸರಿಯಾದ ವಯಸ್ಸು ಯಾವುದು?
Summary: ಮದುವೆ ತಡವಾದರೆ ಎದುರಾಗುವ ಆರೋಗ್ಯ ಮತ್ತು ಜೀವನ ಸಮಸ್ಯೆಗಳು ಯಾವುವು? ಪುರುಷ- ಮಹಿಳೆಯರಿಗೆ ವಿವಾಹಕ್ಕೆ ಸರಿಯಾದ ವಯಸ್ಸು ತಿಳಿಯಿರಿ.
belagavi news:
ಮದುವೆ ಕಡವಾದರೆ ಆರೋಗ್ಯ ಮಾನಸಿಕ ಒತ್ತಡ ಕುಟುಂಬ ಜೀವನ ಮತ್ತು ಸಂತಾನ ಸಂಬಂಧಿತ ಯಾವೆಲ್ಲ ಸಮಸ್ಯೆಗಳು ಎದುರಾಗಬಹುದು? ಪುರುಷರು ಮತ್ತು ಮಹಿಳೆಯರಿಗೆ ವಿವಾಹಕ್ಕೆ ಸರಿಯಾದ ವಯಸ್ಸು ಯಾವುದು ಎಂಬುದರ ಬಗ್ಗೆ ತಜ್ಞರ ಅಭಿಪ್ರಾಯ ಸಾಮಾಜಿಕ ಮತ್ತು ಆರೋಗ್ಯದ ಅಂಶಗಳ ಸಂಪೂರ್ಣ ಮಾಹಿತಿ ಇಲ್ಲಿ ಇದೆ.

ಇಂದಿನ ಪೀಳಿಗೆ ಮದುವೆಗೆ ಹಿಂಜರಿಯುವುದೇಕೆ? ಕಾರಣಗಳೇನು?

'ನಿಮ್ಮ ಮಗಳ ಮದುವೆ ಯಾವಾಗ? ನಿಮ್ಮ ಮಗನ ಮದುವೆ ಸಂಬಂಧ ಫಿಕ್ಸ್ ಆಯಿತೇ? ನೀವು ಒಳ್ಳೆಯ ಕೆಲಸದಲ್ಲಿದ್ದೀರಿ, ಮದುವೆಗೆ ಏಕೆ ತಡ?
ನಾನು ಈಗ ಮದುವೆಯಾಗೊಲ್ಲ ಸ್ವಲ್ಪ ಸೆಟಲ್ ಆದ ಬಳಿಕ ಯೋಚಿಸುತ್ತೇನೆ ಇಂತಹ ಮಾತುಗಳು ಇಂದು ಸಾಮಾನ್ಯವಾಗಿ ಕೇಳಿ ಬರುತ್ತಿವೆ.
ಇಂದಿನ ಯುವ ಪೀಳಿಗೆ ಮದುವೆಯನ್ನು ಮುಂದೂಡುತ್ತಿರುವುದಕ್ಕೆ ಹಲವು ಸಾಮಾಜಿಕ ಹಾಗೂ ವೈಯಕ್ತಿಕ ಕಾರಣಗಳಿವೆ, ಅದರಲ್ಲಿ ಪ್ರಮುಖವಾದದ್ದು ಆರ್ಥಿಕ ಅಸ್ಥಿರತೆ .

ಆರ್ಥಿಕ ಅಸ್ಥಿರತೆ - ಮದುವೆ ವಿಳಂಬದ ಪ್ರಮುಖ ಕಾರಣ:

ಇತ್ತೀಚಿನ ದಿನಗಳಲ್ಲಿ ಉದ್ಯೋಗ ಸಿಗುವುದೇ ದೊಡ್ಡ ಸವಾಲಾಗಿದ್ದು, ಸಿಕ್ಕ ಕೆಲಸವನ್ನು ಉಳಿಸಿಕೊಳ್ಳುವುದು ಅಷ್ಟೇ ಕಷ್ಟಕರವಾಗಿದೆ.
*ಕಡಿಮೆ ಸಂಬಳ
*ಹೆಚ್ಚುತ್ತಿರುವ ಜೀವನ ವೆಚ್ಚ
*ಮನೆ ವಾಹನ ಶಿಕ್ಷಣಕ್ಕೆ ಸಂಬಂಧಿಸಿದ EMI ಗಳು

ಇವುಗಳೆಲ್ಲ, ಯುವಕರ ಭವಿಷ್ಯವನ್ನು ಅನಿಶ್ಚಿತಗೊಳಿಸುತ್ತಿವೆ 'ನಾನು ನನ್ನ ಜೀವನವನ್ನು ಸರಿಯಾಗಿ ನಡೆಸಿಕೊಳ್ಳಲಾಗದಿದ್ದರೆ ಮತ್ತೊಬ್ಬರ ಜವಾಬ್ದಾರಿಯನ್ನು ಹೇಗೆ ತೆಗೆದುಕೊಳ್ಳಬಲ್ಲೆ?' ಎಂಬ ಭಯ ಅನೇಕ ಯುವಕರಲ್ಲಿ ಹೆಚ್ಚುತ್ತಿದೆ ಇದೇ ಕಾರಣದಿಂದ ಮದುವೆಯನ್ನು ತಡ ಮಾಡುವ ನಿರ್ಧಾರಕ್ಕೆ ಬರುತ್ತಿದ್ದಾರೆ.

ವೃತ್ತಿ ಜೀವನಕ್ಕೆ ಆದ್ಯತೆ: ಯುವ ಪೀಳಿಗೆ ಮದುವೆಯನ್ನು ಮುಂದೂಡುತ್ತಿರುವ ಮತ್ತೊಂದು ಕಾರಣ

ಇಂದಿನ ಯುವ ಪೀಳಿಗೆ ಶಿಕ್ಷಣ ಉದ್ಯೋಗ ಮತ್ತು ಸ್ವಯಮ ಗುರುತಿನ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ನಮ್ಮ ವೃತ್ತಿ ಜೀವನವನ್ನು ಗಟ್ಟಿಗೊಳಿಸುವ ಹಂತದಲ್ಲಿ ಮದುವೆ ಮಾಡಿದರೆ,

ಕೆಲಸದಲ್ಲಿ ಗಮನ ಕಡಿಮೆಯಾಗಬಹುದು

ಕುಟುಂಬದ ಜವಾಬ್ದಾರಿಗಳು ಹೆಚ್ಚಾಗಬಹುದು

ತಮ್ಮ ಗುರಿಗಳನ್ನು ಸಾಧಿಸಲು ಅಡ್ಡಿ ಯಾಗಬಹುದು.

ಎಂಬ ಭಯ ಯುವಕರಲ್ಲಿ ಹೆಚ್ಚಾಗಿದೆ ಇದೇ ಕಾರಣದಿಂದ ಮದುವೆ ತಮ್ಮ ವೃತ್ತಿ ಜೀವನವನ್ನು ನಿಲ್ಲಿಸಬಹುದು ಎಂಬ ಭಾವನೆಯಿಂದ ಅವರು ವಿವಾಹವನ್ನು ತಡ ಮಾಡುತ್ತಿದ್ದಾರೆ.

ವಿವಾಹ ವೈಫಲ್ಯಗಳ ಪರಿಣಾಮ: ಮದುವೆಯ ಬಗ್ಗೆ ಭಯ ಹೆಚ್ಚುತ್ತಿರುವುದು

ಇತ್ತೀಚಿನ ದಿನಗಳಲ್ಲಿ ಜಗಳಗಳು, ಕೌಟುಂಬಿಕ ಹಿಂಸಾಚಾರ, ವಿಚ್ಛೇದನ ಪ್ರಕರಣಗಳು ಹೆಚ್ಚುತ್ತಿರುವುದು ಮದುವೆಯ ಕುರಿತು ನಕಾರಾತ್ಮಕ ದೃಷ್ಟಿಕೋನವನ್ನು ಉಂಟು ಮಾಡಿದೆ.
ಮದುವೆಯನ್ನು ಸಂತೋಷದ ಬಂಧನವಾಗಿ ನೋಡುವ ಬದಲು ಸಮಸ್ಯೆಗಳ ಮೂಲ ಎಂದು ಅನೇಕರು ಕಾಣತೊಡಗಿದ್ದಾರೆ ಇದರಿಂದ ಯುವ ಪೀಳಿಗೆಯಲ್ಲಿ ಮದುವೆಯ ಮೇಲಿನ ವಿಶ್ವಾಸ ಕಡಿಮೆಯಾಗುತ್ತಿದೆ.

ಸ್ವಾತಂತ್ರ್ಯದ ಬಯಕೆ: ಮದುವೆ ಬಗ್ಗೆ ಯುವ ಪೀಳಿಗೆಯ ಬದಲಾದ ಮನಸ್ಥಿತಿ

ಇಂದಿನ ಯುವ ಪೀಳಿಗೆಯಲ್ಲಿ ಒಂಟಿಯಾಗಿ ಬದುಕುವುದು ಸ್ವಾತಂತ್ರ ನಿರ್ಧಾರಗಳಿಗೆ ದಾರಿ ಮಾಡಿ ಕೊಡುತ್ತದೆ ಎಂಬ ಕಲ್ಪನೆ ಬಲವಾಗುತ್ತಿದೆ. ಮದುವೆ ಮಾಡಿದರೆ

ವೈಯಕ್ತಿಕ ಸ್ವಾತಂತ್ರ್ಯಕ್ಕೆ ಕಡಿವಾಣ ಬೀಳಬಹುದು.

ತಮ್ಮ ಜೀವನ ಶೈಲಿಯನ್ನು ಸಂಪೂರ್ಣವಾಗಿ ಆನಂದಿಸಲು ಅಡ್ಡಿ ಯಾಗಬಹುದು.

ಎಂಬ ನಂಬಿಕೆ ಹೆಚ್ಚುತ್ತಿದೆ ಅನೇಕರು ಮದುವೆ ಎಂದರೆ ಅಂದುಕೊಳ್ಳುವುದು ಮತ್ತು ರಾಜಿಮಾಡಿಕೊಳ್ಳುವುದು ಎಂಬ ಭಾವಿಸುತ್ತಾರೆ ಈ ಕಾರಣದಿಂದ ಅವರು ಬೇಗನೆ ಮದುವೆಯಾಗಲು ಇಚ್ಛಿಸುವುದಿಲ್ಲ.

ಮಾನಸಿಕ ಸಮಸ್ಯೆಗಳು: ಮದುವೆ ವಿಳಂಬಕ್ಕೆ ಮತ್ತೊಂದು ಪ್ರಮುಖ ಕಾರಣ

ಇತ್ತೀಚಿನ ದಿನಗಳಲ್ಲಿ ಯುವಕರಲ್ಲಿ ಆತಂಕ, ಖಿನ್ನತೆ, ಮಾನಸಿಕ ಆಘಾತದಂತಹ ಸಮಸ್ಯೆಗಳು ಹೆಚ್ಚುತ್ತಿರುವುದು ಗಮನಾರ್ಹ ಇಂತಹ ಸ್ಥಿತಿಯಲ್ಲಿ ಅನೇಕರು ತಮ್ಮನ್ನು ತಾವು ಕೇಳಿಕೊಳ್ಳುತ್ತಾರೆ... "ಮಾನಸಿಕವಾಗಿ ಸ್ಥಿರವಾಗಿಲ್ಲದಿದ್ದಾಗ ಮದುವೆಯಾಗುವುದು ಸರಿಯೇ?"

ಈ ಆತ್ಮ ಪರಿಶೀಲನೆಯೇ ಮದುವೆಯನ್ನು ಮುಂದುಡುವ ನಿರ್ಧಾರಕ್ಕೆ ಕಾರಣವಾಗುತ್ತಿದೆ ಮಾನಸಿಕ ಆರೋಗ್ಯವನ್ನು ಮೊದಲ ಆದ್ಯತೆಯಾಗಿ ನೋಡುವ ಮನೋಭಾವ ಇಂದು ಹೆಚ್ಚುತ್ತಿದೆ.

ಮದುವೆ ವಿಳಂಬ ಮಾಡಿದರೆ ಎದುರಾಗುವ ಸಮಸ್ಯೆಗಳು ಯಾವುವು ?

ಒಂಟಿತನ ಹೆಚ್ಚಾಗುವುದು: ವಯಸ್ಸು ಹೆಚ್ಚಾಗುತ್ತಾ ಹೋದಂತೆ ಸ್ನೇಹಿತರ ಒಳ್ಳೆಯ ಸೀಮಿತವಾಗುತ್ತದೆ ಕುಟುಂಬದೊಂದಿಗೆ ಸಮಯ ಕಳೆಯುವ ಅವಕಾಶ ಕಡಿಮೆಯಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಭಾವನಾತ್ಮಕ ಬೆಂಬಲದ ಕೊರತೆ ಉಂಟಾಗಿ ಒಂಟಿತನ ಇನ್ನಷ್ಟು ತೀವ್ರ ವಾಗುತ್ತದೆ ಇದು ಮಾನಸಿಕ ಆರೋಗ್ಯದ ಮೇಲೆ ಕೂಡ ಪರಿಣಾಮ ಬೀರುವ ಸಾಧ್ಯತೆ ಇದೆ.

ಹೊಂದಾಣಿಕೆ ಮತ್ತು ಸಂಘರ್ಷಗಳ ಸಮಸ್ಯೆ:

30 ವರ್ಷಗಳ ನಂತರ ಉತ್ತಮ ಜೀವನ ಸಂಗಾತಿಯನ್ನು ಕೊಂಡುಕೊಳ್ಳುವುದು ಹೆಚ್ಚು ಕಷ್ಟಕರವಾಗುತ್ತದೆ ಮದುವೆಯ ಬಳಿಕ ಹಲವು ವಿಷಯಗಳಲ್ಲಿ ರಾಜ ಮಾಡಿಕೊಳ್ಳುವ ಅಗತ್ಯ ಎದುರಾಗುತ್ತದೆ.
ಅತ್ಯಂತ ವಯಸ್ಸಾದ ನಂತರ ಮದುವೆಯಾಗುವ ಹುಡುಗಿ ಮತ್ತು ಹುಡುಗರು ಹೆಚ್ಚು ಸ್ವತಂತ್ರ ಜೀವನಕ್ಕೆ ಹೊಂದಿಕೊಂಡಿರುತ್ತಾರೆ ತಮ್ಮ ಇಚ್ಛೆಯಂತೆ ಬದುಕುವ ದೃಢ ಸಂಕಲ್ಪ ಹೆಚ್ಚಾಗುವುದರಿಂದ ಹೊಂದಿಕೊಳ್ಳುವ ಸಾಮರ್ಥ್ಯ ಕಡಿಮೆಯಾಗಬಹುದು ಇದರ ಪರಿಣಾಮವಾಗಿ ಸಣ್ಣ ಸಣ್ಣ ಸಮಸ್ಯೆಗಳು ದೊಡ್ಡ ಸಂಘರ್ಷಗಳಿಗೆ ಮತ್ತು ಕೆಲವೊಮ್ಮೆ ವಿಶೇಧನದ ವರೆಗೆ ಕರೆದೋಯ್ಯುವ ಸಾಧ್ಯತೆ ಇರುತ್ತದೆ.

ವೃದ್ಧಾಪ್ಯದಲ್ಲಿ ಭದ್ರತೆಯ ಸಮಸ್ಯೆ ಮದುವೆ ವಿಳಂಬದ ದೀರ್ಘಕಾಲಿನ ಪರಿಣಾಮ:

ಮದುವೆ ವಿಲ್ಲಂಬವಾದರೆ ಅದು ಮಕ್ಕಳು ಹಾಗೂ ಅವರ ಆರೈಕೆಯ ಮೇಲೆ ನೇರ ಪರಿಣಾಮ ಬೀರುತ್ತದೆ ವಯಸ್ಸಾದಂತೆ ಮಾನಸಿಕ ಹಾಗೂ ದೈಹಿಕ ಶಕ್ತಿಯು ಕುಗ್ಗುತ್ತದೆ ಇಂತ ಸಂದರ್ಭ ದಲ್ಲಿ ಸಹಾಯ ಸಹವಾಸ ಮತ್ತು ಭದ್ರತೆಯ ಕೊರತೆ ಎದುರಾಗುವ ಸಾಧ್ಯತೆ ಹೆಚ್ಚು ವೃದ್ಧಾಪ್ಯ ದಲ್ಲಿ ಒಂಟಿತನ ಮತ್ತು ಅವಲಂಬನೇ ಜೀವನ ವನ್ನು ಕಷ್ಟಕರವಾಗಿಸಬಹುದು.

ಸಾಮಾಜಿಕ ಅಸಮತೋಲನ ಸಮಾಜದ ಮೇಲೆ ಬೀರುವ ಪರಿಣಾಮ:

ಮದುವೆಗಳ ಸಂಖ್ಯೆ ಕಡಿಮೆಯಾದರೆ ಜನಸಂಖ್ಯಾ ಸಮತೋಲನದಲ್ಲಿ ಬದಲಾವಣೆ ಉಂಟಾಗುತ್ತದೆ.
ಯುವ ಜನಸಂಖ್ಯೆ ಕಡಿಮೆಯಾಗುವುದು

ವೃದ್ಧರ ಪ್ರಮಾಣ ಹೆಚ್ಚಾಗುವುದು:

ಇದು ಆರ್ಥಿಕತೆ ಉದ್ಯೋಗ ವ್ಯವಸ್ಥೆ ಮತ್ತು ಸಾಮಾಜಿಕ ರಚನೆಗಳ ಮೇಲೆ ದೀರ್ಘಕಾಲಿನ ಪರಿಣಾಮ ಬೀರುವ ಸಾಧ್ಯತೆ ಇದೆ.

ಆರೋಗ್ಯ ಸಮಸ್ಯೆಗಳು: ತಡ ಮದುವೆಯ ವೈದ್ಯಕೀಯ ಅಪಾಯಗಳು

ವಯಸ್ಸಾದ ನಂತರ ಮದುವೆಯಾಗುವುದರಿಂದ ಮಕ್ಕಳನ್ನು ಹೊಂದುವ ಸಾಧ್ಯತೆಗಳು ಕಡಿಮೆಯಾಗುತ್ತವೆ ಎಂದು ವೈದ್ಯರು ಎಚ್ಚರಿಸುತ್ತಾರೆ.
ವಯಸ್ಸು ಹೆಚ್ಚಾದಂತೆ ಮಹಿಳೆಯರಲ್ಲಿ
ಶ್ರೋಣಿಯ ಮೂಳೆಗಳು ದುರ್ಬಲಗೊಳ್ಳುವುದು.
ಸಾಮಾನ್ಯ ಹೆರಿಗೆಯ ಸಾಧ್ಯತೆ ಕಡಿಮೆಯಾಗುವುದು

ಫಲವತ್ತತೆ ಕುಸಿಯುವುದು:

ಎಂಬ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಇದರ ಸಂದರ್ಭಗಳಲ್ಲಿ ಅಂಡಾಶಯಗಳನ್ನು ಉತ್ತೇಜಿಸುವ ಔಷಧಗಳ ಅವಶ್ಯಕತೆ ಉಂಟಾಗುತ್ತದೆ ಇದರಿಂದ 'ಅಂಡಾಶಯ ಹೈಪರ್ ಸ್ಟಿಮ್ಯುಲೇಶನ್ ಸಿಂಡ್ರೋಮ್ ' ಎಂಬ ಗಂಭೀರ ಸ್ಥಿತಿ ಉಂಟಾಗುವ ಸಾಧ್ಯತೆ ಇದೆ ಇದು ದೇಹದ ಇತರೆ ವ್ಯವಸ್ಥೆಗಳ ಮೇಲು ಪರಿಣಾಮ ಬೀರುತ್ತದೆ ಅದಕ್ಕಾಗಿಯೇ ಸರಿಯಾದ ಸಮಯದಲ್ಲಿ ಮದುವೆಯಾಗುವುದು ಆರೋಗ್ಯದ ದೃಷ್ಟಿಯಿಂದಲೂ ಮಹತ್ವದದ್ದು ಎಂದು ತಜ್ಞರ ಸಲಹೆ ನೀಡುತ್ತಾರೆ.

ಓದುಗರಿಗೆ ವಿಶೇಷ ಸೂಚನೆ:
ಈ ವರದಿಯಲ್ಲಿ ನೀಡಿರುವ ಎಲ್ಲಾ ಆರೋಗ್ಯ ಸಂಬಂಧಿತ ಮಾಹಿತಿ ಸಾಮಾನ್ಯ ಅರಿವಿಗಾಗಿ ಮಾತ್ರ ಇದನ್ನು ವೈದ್ಯಕೀಯ ಸಲಹೆಗಾಗಿ ಪರಿಗಣಿಸಬಾರದು ಯಾವುದೇ ಆರೋಗ್ಯ ಸಮಸ್ಯೆ ಅಥವಾ ಚಿಕಿತ್ಸೆ ಕುರಿತು ನಿರ್ಧಾರ ಕೈಗೊಳ್ಳುವ ಮೊದಲು ಪರಿಣತ ವೈದ್ಯರನ್ನು ಸಂಪರ್ಕಿಸುವುದು ಅತ್ಯಂತ ಅಗತ್ಯ.
ಇನ್ನಷ್ಟು ಓದಿರಿ:

IPL 2026 ಬೆಂಗಳೂರು: RCB ಆಟ ಇಂದು ಅಥವಾ ನಾಳೆ – ಅಂತಿಮ ನಿರ್ಧಾರ
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online